Wednesday, June 27, 2012

ಕಾಮನಬಿಲ್ಲಿನ ಬಣ್ಣಗಳನೇಕ...

ಪ್ರಸ್ತಾವನೆ, ಭಾಗ - 1


ನಮಸ್ಕಾರ, 

ವಿಡಿಯೋಗ್ರಫಿ ಕಲಿಯುವುದಕ್ಕಿಂತಲೂ ಮುಂಚೆ ನಾವು ತಿಳಿದುಕೊಳ್ಳ ಬೇಕಾದ ಹಲವು ಸೂಕ್ಷ್ಮಗಳಿವೆ.

ಅದರಲ್ಲಿ ಮೊದಲನೆಯದಾಗಿ ಬಣ್ಣಗಳ ಬಗೆಗೆ:

ಸೂರ್ಯನ ಬೆಳಕನ್ನು ಪ್ರಿಸಂ (Prism) ಮೂಲಕ ಹಾಯಿಸಿದಾಗ ನಮಗೆ ಮನುಷ್ಯನ ಕಣ್ಣಿಗೆ ಕಾಣುವ ಸಪ್ತ ವರ್ಣಗಳೂ, ನಾವು ನೋಡಲಾರದ ಅತೀ ನೇರಳೆ (ultraviolet) ಮತ್ತು ಅತಿ ಕೆಂಪು ಬಣ್ಣವು (Infrared)  ವರ್ಣಪಕ್ತಿಯಲ್ಲಿ (Spectrum) ಮೂಡುತ್ತದೆ. ಈ ಬಗ್ಗೆ ನಿಮಗೆ ಪ್ರಾಥಮಿಕ ಶಾಲೆಯಲ್ಲೇ ಹೇಳಿ ಕೊಟ್ಟಿರುತ್ತಾರೆ. ಆದರೂ, ಇನ್ನೊಮ್ಮೆ ಇಲ್ಲಿ ತಿಳಿದುಕೊಳ್ಳೋಣ.

ಸೂರ್ಯನ ಬೆಳಕನ್ನು ಪ್ರಿಸಂ ಮೂಲಕ ಹಾಯಿಸಿದಾಗ ಅದು ಅತೀ ನೇರಳೆ, ನೇರಳೇ, ಇಂಡಿಗೋ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು, ಅತೀ ಕೆಂಪು ಬಣ್ಣಗಳಾಗಿ ವಿಭಜನೆ ಹೊಂದುತ್ತದೆ.

ಇಲ್ಲಿ ಪ್ರತಿಯೊಂದು ಬಣ್ಣವೂ ವಿಭಿನ್ನ ತರಂಗಾಂತರ (wavelength) ಹೊಂದಿದ್ದು. ಕೆಂಪು ಅತಿ ಹೆಚ್ಚಿನ ತರಂಗಾಂತರ ಹೊಂದಿದ್ದು 625740 nm.