Wednesday, June 27, 2012

ಕಾಮನಬಿಲ್ಲಿನ ಬಣ್ಣಗಳನೇಕ...

ಪ್ರಸ್ತಾವನೆ, ಭಾಗ - 1


ನಮಸ್ಕಾರ, 

ವಿಡಿಯೋಗ್ರಫಿ ಕಲಿಯುವುದಕ್ಕಿಂತಲೂ ಮುಂಚೆ ನಾವು ತಿಳಿದುಕೊಳ್ಳ ಬೇಕಾದ ಹಲವು ಸೂಕ್ಷ್ಮಗಳಿವೆ.

ಅದರಲ್ಲಿ ಮೊದಲನೆಯದಾಗಿ ಬಣ್ಣಗಳ ಬಗೆಗೆ:

ಸೂರ್ಯನ ಬೆಳಕನ್ನು ಪ್ರಿಸಂ (Prism) ಮೂಲಕ ಹಾಯಿಸಿದಾಗ ನಮಗೆ ಮನುಷ್ಯನ ಕಣ್ಣಿಗೆ ಕಾಣುವ ಸಪ್ತ ವರ್ಣಗಳೂ, ನಾವು ನೋಡಲಾರದ ಅತೀ ನೇರಳೆ (ultraviolet) ಮತ್ತು ಅತಿ ಕೆಂಪು ಬಣ್ಣವು (Infrared)  ವರ್ಣಪಕ್ತಿಯಲ್ಲಿ (Spectrum) ಮೂಡುತ್ತದೆ. ಈ ಬಗ್ಗೆ ನಿಮಗೆ ಪ್ರಾಥಮಿಕ ಶಾಲೆಯಲ್ಲೇ ಹೇಳಿ ಕೊಟ್ಟಿರುತ್ತಾರೆ. ಆದರೂ, ಇನ್ನೊಮ್ಮೆ ಇಲ್ಲಿ ತಿಳಿದುಕೊಳ್ಳೋಣ.

ಸೂರ್ಯನ ಬೆಳಕನ್ನು ಪ್ರಿಸಂ ಮೂಲಕ ಹಾಯಿಸಿದಾಗ ಅದು ಅತೀ ನೇರಳೆ, ನೇರಳೇ, ಇಂಡಿಗೋ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು, ಅತೀ ಕೆಂಪು ಬಣ್ಣಗಳಾಗಿ ವಿಭಜನೆ ಹೊಂದುತ್ತದೆ.

ಇಲ್ಲಿ ಪ್ರತಿಯೊಂದು ಬಣ್ಣವೂ ವಿಭಿನ್ನ ತರಂಗಾಂತರ (wavelength) ಹೊಂದಿದ್ದು. ಕೆಂಪು ಅತಿ ಹೆಚ್ಚಿನ ತರಂಗಾಂತರ ಹೊಂದಿದ್ದು 625740 nm.


11 comments:

  1. shuru maadi paata.. naavella keloke siddharaagiddeevi

    ReplyDelete
  2. ಬದರಿನಾಥ್ ಸರ್,
    ನೀವು ಇದರ ಲಿಂಕ್ ಕೊಟ್ಟಾಗ ನೀವು ವಿಡಿಯೋ ತುಣುಕುಗಳನ್ನು ಹಾಕುತ್ತಿರೇನೊ ಅಂದುಕೊಂಡೆ. ಆದ್ರೆ ಇಲ್ಲಿ ನೋಡಿದರೆ ಅದರ ಬಗ್ಗೆ ಮಾಹಿತಿ ಮತ್ತು ಕಲಿಕೆಯ ವಸ್ತು. ಇದು ಖಂಡಿತ ಒಳ್ಳೆಯ ಬೆಳವಣಿಗೆ ನನಗೂ ಇದು ಬೇಕು. ನಿಮ್ಮ ಪ್ರತಿ ಲೇಖನದ ಲಿಂಕ್ ನನಗೆ ಕಳಿಸಿ ಪ್ಲೀಸ್ ತಪ್ಪದೇ ಓದುತ್ತೇನೆ.

    ReplyDelete
  3. it will help alot sir........... continue.........

    ReplyDelete
  4. ಹೊಸ ಹೊಸ ಆಲೋಚನೆ .. ಹೊಸ ಹೊಸ ಬದಲಾವಣೆ .. ಉತ್ತಮ ಯೋಜನೆ .. ಒಳ್ಳೆಯದಾಗಲಿ ಸರ್ .. :)

    ReplyDelete
  5. olleya prayathna,uttama
    maahitigaagi dhanyavaadagalu.

    ReplyDelete
  6. ಉತ್ತಮ ಮಾಹಿತಿ! ಧನ್ಯವಾದಗಳು

    ReplyDelete
  7. ಉಪಯುಕ್ತ ಮಾಹಿತಿ... ಶಾಲೆಯ ಪಾಠ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು!

    ReplyDelete
  8. ಉಪಯುಕ್ತ ಮಾಹಿತಿ. ಆದರೆ ಅರ್ಧದಲ್ಲಿ ನಿಲ್ಲಿಸಿದ ಹಾಗೆ ಇದೆಯಲ್ಲಾ? ದಯವಿಟ್ಟು ಫೋಟೋಗ್ರಫಿ ಬಗ್ಗೆ ಬರೆಯುತ್ತಿರಿ. ನಾನು ತುಂಬಾ ಆಸಕ್ತಿ ಹೊಂದಿದವನೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅದ್ಬುಲ್ ರಹೆಮಾನ್ ಪಾಷಾ ರವರ ಜತೆ ಸೇರಿ ಕೆಲವು ಡಾಕುಮೆಂಟರಿ ಮಾಡಿದ್ದೆ. (ಅದರ ಕಾಪಿ ಈಗ ನನ್ನಲ್ಲಿ ಇಲ್ಲ). ನಂತರ ನಾನು ಹೊರದೇಶಕ್ಕೆ ಬಂದ ಮೇಲೆ ಅವರ ಸಂಪರ್ಕ ಆಗಲೇ ಇಲ್ಲ. ತಾವು ಕೂಡ ಇದೇ ಫೀಲ್ಡ್ ನಲ್ಲಿರುವುದರಿಂದ ಹಿಂದಿನ ನೆನಪು ಬಂತು. ನಿಮ್ಮ ಲೇಖನ ಮುಂದುವರಿಸಿ.......

    ReplyDelete
  9. ಬದರಿ ಸರ್ ಈ ಬ್ಲಾಗ್ ನೋಡಿ ಇಲ್ಲ ನಾನು... ಎಷ್ಟು ಮಾಹಿತಿ ನೀಡಿದ್ದೀರಿ ಇದನ್ನು ಇಷ್ಟು ದಿನ ಹೇಗೆ ತಪ್ಪಿಸಿದೆ ಎಂದೆನಿಸುತ್ತೆ. ಬಣ್ಣಗಳ ಬಗ್ಗೆ ಶಾಲೆಯಲ್ಲಿ ಓದಿದ್ದು ನೆನಪಾಗಿದ್ದು ನಿಮ್ಮ ಲೇಖನದಿಂದಲೇ . ಧನ್ಯವಾದಗಳು

    ReplyDelete